Saturday, April 16, 2011

Ashtaa vakra geetha ಅಷ್ಟಾವಕ್ರ ಗೀತಾ

ಒಮ್ಮೆ ಜನಕ ಮಹಾರಾಜ ತನ್ನ ಅಸ್ಥಾನದಲ್ಲಿ ದರ್ಬಾರ್ ನಡೆಸುತ್ತಿದ್ದಾಗ, ನಡು ಮಧ್ಯಾಹ್ನದ ಹೊತ್ತು ಒಮ್ಮೆಲೆ ನಿದ್ರೆಯ ಜೊಂಪು ಹತ್ತಿತಂತೆ. ದರಬಾರ್ ನಡೆಯುವಾಗ ಹತ್ತಿದ ನಿದ್ರೆಯ ಜೊಂಪಿನ ನಡುವೆ ಸಣ್ಣ ಕನಸಿನ ಕಲರವ. ಆ ಕನಸಿನಲ್ಲಿ ಜನಕ ಮಹಾರಾಜ ಆ ಕನಸಿನಲ್ಲಿ ರೊಟ್ಟಿ ತಿನ್ನುವ ಸಲುವಾಗಿ ಯಾರ ಬಳಿಯೋ ಬೇಡಿದಂತೆ, ಇನ್ನೇನೇನೋ ಕನಸುಗಳ ಸರಣೆ ಯಾತ್ರೆ. ಕನಸಿನಲಿ ತಡೆಯಲಾರದ ಹಸಿವಿನ ಹೊಡೆತ, ಬೇಡಿದ ರೊಟ್ಟಿ ದೊರೆಯದ ನೋವಿನ ಭಾವದ ನಡುವೆ ಎಚ್ಚರವಾಯಿತಂತೆ.

ಎಚ್ಚರವಾದಾಗ ನೋಡಿದರೆ ರೊಟ್ಟಿಯೂ ಇಲ್ಲ, ರೊಟ್ಟಿ ಹಿಡಿದಿದ್ದ ವ್ಯಕ್ತಿಯೂ ಇಲ್ಲ, ದರಬಾರ್ ನಡೆಯುತ್ತಿದೆ. ತಾನು ಸಿಂಹಾಸನದ ಮೇಲೆ ಕುಳಿತು ನಿದ್ರೆಯ ಜೊಂಪಿನಲಿ ಕಂಡ ಕನಸಿದು. ಆದರೆ ಹೊಟ್ಟೆಯಲಿ ಉಳಿದಿರುವ ಹಸಿವು ಕಂಡ ಕನಸನ್ನು ಕೇವಲ ಕನಸು ಇನ್ನಲು ಒಪ್ಪುತ್ತಿಲ್ಲ. ಈ ಗೊಂದಲವನ್ನು ಜನಕ ಮಹಾರಾಜ ತನ್ನ ಆಸ್ಥಾನದಲ್ಲಿ ಬಂದಿದ್ದ ಅಷ್ಟಾವಕ್ರ ಮುನಿಯ ಬಳಿ ಕೇಳಿದನಂತೆ. ಆ ಸಂವಾದದ ಸಂಪೂರ್ಣ ಪಾಠವೇ ಅಷ್ಟಾವಕ್ರ ಗೀತಾ.

ಅಷ್ಟಾವಕ್ರ ಮುನಿ ಬದುಕಿನ ಸಂಪೂರ್ಣ ಜ್ಞಾನ ಪಡೆದಿದ್ದ ಮಹಾ ತಪಸ್ವಿ. ತನ್ನ ದೇಹದಲ್ಲಿ ಎಂಟು ವಕ್ರಗಳನ್ನು ಹೊಂದಿದ್ದ ವ್ಯಕ್ತಿ. ಒಂದು ಕೈ ಉದ್ದ, ಮತ್ತೊಂದು ಗಿಡ್ಡ, ಹೀಗೇ ಎಂಟು ವಕ್ರಗಳು. ಜ್ಞಾನದಲ್ಲಿ ಅಪ್ರತಿಮ.

ಸತ್ಯ ಮತ್ತು ಮಿಥ್ಯಗಳ ಅನ್ವೇಷಣೆಯೇ ಈ ಅಷ್ಟಾವಕ್ರ ಗೀತಾ.... ಒಮ್ಮೆ ಕೇಳಿ ಆನಂದಿಸಿ.

1 comment:

  1. ಹೌದು, ಅದ್ಭುತವಾಗಿದೆ ಆ ಗೀತೆ. ಯಾವ ಮಡಿ ಮೈಲಿಗೆ ಇಲ್ಲದೆ, ತಿಳಿ, ನೇರ ಹಾಗೂ ಸ್ಪಷ್ಟ ಬಾಷೆಯಲ್ಲಿ ಬದುಕಿನ ಸಾರ, ಉನ್ನತಿಯನ್ನು ಸಾರುತ್ತದೆ. ಅದನ್ನು ನೆನೆಪಿಸಿಕೊಂಡ ನೀವು ಧನ್ಯರು, ಅಭಿನಂದನೀಯರು!

    ReplyDelete