Sunday, April 17, 2011

ಇರುವೆ ಸಾಲು

ಬದುಕಿದುವೆ ಇರುವೆ ಸಾಲು
ಸಾಲಿನಲ್ಲೇ ನಡೆಯಬೇಕು,
ದುಡಿಯುತಲೇ ಸಾಯಬೇಕು.
ಇರುವ ತನಕ ದುಡಿತ - ಬಡಿತ

ಆದರೇನು ಮಾಡಲಿ
ನನ್ಪ್ತ ಮನದ ಹಾದಿ ತುಂಬಾ
ಕನಸಿನದೇ ಗೋಪುರ
ಲಾಲಿ ಹಾಡು ಕೇಳಬೇಕು
ಮನಸು ಹರಡಿ ಹರಿಯ ಬೇಕು

ಆದರೇನು ಮಾಡಲಿ
ಕನಸಿಗಿಲ್ಲಿ ತಾವು ಇಲ್ಲ
ನಡೆವ ಹಾದಿ ತುಂಬಾ ನೋಡು
ಕಲ್ಲು ಮುಳ್ಳು ಹಾದಿ ಜಾಡು
ಮೃಗತೃಷ್ಣೆಯ ಮರೆಯಬೇಕು
ಬದುಕು ಇಂತೆಯೇ ಸಾಗಬೇಕು

ಹತ್ತು ಹೆಜ್ಜೆ ಜೊತೆಯಲ್ಲಿಟ್ಟು
ನಡೆವ ನಾವು ಸ್ನೇಹದಿ
ಸಪ್ತಪದಿಗೂ ಮಿಗಿಲದುವೆ
ಸ್ನೇಹ ಸಂಚಾರವು

ಆದರೇನು ಮಾಡಲಿ
ನಾನು ಮೇಘರಾಜನಲ್ಲ
ಆಗಸವು ನನ್ನದಲ್ಲ
ನಾನು ನಡೆವ ಭೂಮಿ ಕೂಡಾ
ನನ್ನದೆಂಬ ಭ್ರಮೆಯೂ ಇಲ್ಲ.

ಬಾರೇ ನಗುವೆ,
ಮಡಿಲ ಮಗುವೆ
ಬದುಕು ಮುಂದೆ ಸಾಗಲಿ
ಮುಖದ ನಗೆಯು ಮಾಗಲಿ

No comments:

Post a Comment