Wednesday, April 20, 2011

ಆದರ್ಶದ ಕನಸುಗಳು - ವಾಸ್ತವದ ರಾಮರಾಜ್ಯ

ರಾಮರಾಜ್ಯ ಎಂದರೇನು?

ರಾಮನ ಕಾಲವೇ, ನಂತರವೇ? ರಾಮರಾಜ್ಯ ಏಕೆ ಆದರ್ಶ?
ಪ್ರಜೆಗಳಿಗೆ ಸುಖ, ಸಂತಸ, ನೆಮ್ಮದಿ, ಸಂತೃಪ್ತಿ ಸಮೃದ್ಧವಾಗಿರುವ ಕಾಲವೇ ರಾಮರಾಜ್ಯ. ಯಾವುದೇ ಭಯವಿಲ್ಲದೆ ಪರಸ್ಪರ ಸಮಾಧಾನ ನಂಬಿಕೆಗಳ ಆಧಾರದಲ್ಲಿ ಬೆಳೆದು ಬಂದ ರಾಜ್ಯವೇ ರಾಮರಾಜ್ಯ

ರಾಮರಾಜ್ಯ ಎಂಬುದು ಭರತ ಆಳಿದ ಕಾಲದಲ್ಲಿ ಇದ್ದ ಆಡಳಿತ.
ರಾಜ ಆಳರಸನಾಗದೆ, ಜನರ ನಡುವೆ ಒಂದಾಗಿ, ತಾನೂ ನಾಗರಿಕನಂತೆ ಸಾಮಾನ್ಯನಾಗಿ, ರಾಜ್ಯ ಕೋಶ ಮತ್ತು ಸಂಪತ್ತುಗಳನ್ನು ಜನರ ಏಳಿಗೆಗಾಗಿ ವಿನಿಯೋಗಿಸಿದ ಕಾಲ.
ರಾಜ ಯಾವುದೇ ಯುದ್ದಗಳಲ್ಲಿ ತೊಡಗದೆ, ವಿಷಯ ಲೋಲುಪನಾಗದೆ, ಸಾಮಾನ್ಯನಂತೆ, ಜನರ ನಡುವೆ ಸಾಮಾನ್ಯನಾಗಿ, ಕೇವಲ ಜನ ಪತ್ರತಿನಿಧಿಯಂತೆ ಬದುಕಿದ ನಿಜ ಪ್ರಜಾಪ್ರಭುತ್ವ ಕಾಲ... ಗೋ ಸಂಪತ್ತು, ಭೂ ಸಂಪತ್ತುಗಳಿ ಮಿತಿ ಮೀರದ ಕಂದಾಯ ಹಾಕದ, ಜನರ ಸಂತೃಪ್ತಿಯೇ ನಿಜವಾದ ಾಡಳಿತ ೆಂದು ಭಾವಿಸಿದ ರಾಜ ಹೀಗೆ ರಾಮರಾಜ್ಯ ನಡೆದ ಕಾಲ ....


ನೀವೇನಂತೀರಿ

Sunday, April 17, 2011

ವನಸುಮ

ಕಾಡ ಮಲ್ಲಿಗೆಗೆ ಮುಡಿವವರು ಬೇಕಿಲ್ಲ,
ಪಸರಿಸಿದ ಪರಿಮಳದೆ ಸಾರ್ಥ್ಯಕ್ಯವೆಲ್ಲ
ಅರಳಿಸಿದ ಪರಮಾತ್ಮ ಬೆಳಗಿಸದೆ ಬಿಡಲಾರ
ಮುಡಿಗಿಂತ ಮಿಗಿಲಾದ ಸ್ಥಳ ನೀಡಬಲ್ಲ

ನಲುಗದಿರು ಕೋಮಲೆ ಇಲ್ಲದನು ನೆನೆಸಿ
ಬಾಡಿ ಹೋಗುವ ಭಾವ ಮುದುಡಿ ಹೋಗಲಿ ಇಂದೇ
ಅರಳಲಿ ಬಾಡಿದ ಭಾವ ಮುಕ್ತಿ ಪಥದೆಡೆಗೆ
ಮುಡಿಗಿಂತ ಮಿಗಿಲಾದ ನೆಲೆ ದೊರಕಿತಲ್ಲ

ಇರುವೆ ಸಾಲು

ಬದುಕಿದುವೆ ಇರುವೆ ಸಾಲು
ಸಾಲಿನಲ್ಲೇ ನಡೆಯಬೇಕು,
ದುಡಿಯುತಲೇ ಸಾಯಬೇಕು.
ಇರುವ ತನಕ ದುಡಿತ - ಬಡಿತ

ಆದರೇನು ಮಾಡಲಿ
ನನ್ಪ್ತ ಮನದ ಹಾದಿ ತುಂಬಾ
ಕನಸಿನದೇ ಗೋಪುರ
ಲಾಲಿ ಹಾಡು ಕೇಳಬೇಕು
ಮನಸು ಹರಡಿ ಹರಿಯ ಬೇಕು

ಆದರೇನು ಮಾಡಲಿ
ಕನಸಿಗಿಲ್ಲಿ ತಾವು ಇಲ್ಲ
ನಡೆವ ಹಾದಿ ತುಂಬಾ ನೋಡು
ಕಲ್ಲು ಮುಳ್ಳು ಹಾದಿ ಜಾಡು
ಮೃಗತೃಷ್ಣೆಯ ಮರೆಯಬೇಕು
ಬದುಕು ಇಂತೆಯೇ ಸಾಗಬೇಕು

ಹತ್ತು ಹೆಜ್ಜೆ ಜೊತೆಯಲ್ಲಿಟ್ಟು
ನಡೆವ ನಾವು ಸ್ನೇಹದಿ
ಸಪ್ತಪದಿಗೂ ಮಿಗಿಲದುವೆ
ಸ್ನೇಹ ಸಂಚಾರವು

ಆದರೇನು ಮಾಡಲಿ
ನಾನು ಮೇಘರಾಜನಲ್ಲ
ಆಗಸವು ನನ್ನದಲ್ಲ
ನಾನು ನಡೆವ ಭೂಮಿ ಕೂಡಾ
ನನ್ನದೆಂಬ ಭ್ರಮೆಯೂ ಇಲ್ಲ.

ಬಾರೇ ನಗುವೆ,
ಮಡಿಲ ಮಗುವೆ
ಬದುಕು ಮುಂದೆ ಸಾಗಲಿ
ಮುಖದ ನಗೆಯು ಮಾಗಲಿ

Saturday, April 16, 2011

Ashtaa vakra geetha ಅಷ್ಟಾವಕ್ರ ಗೀತಾ

ಒಮ್ಮೆ ಜನಕ ಮಹಾರಾಜ ತನ್ನ ಅಸ್ಥಾನದಲ್ಲಿ ದರ್ಬಾರ್ ನಡೆಸುತ್ತಿದ್ದಾಗ, ನಡು ಮಧ್ಯಾಹ್ನದ ಹೊತ್ತು ಒಮ್ಮೆಲೆ ನಿದ್ರೆಯ ಜೊಂಪು ಹತ್ತಿತಂತೆ. ದರಬಾರ್ ನಡೆಯುವಾಗ ಹತ್ತಿದ ನಿದ್ರೆಯ ಜೊಂಪಿನ ನಡುವೆ ಸಣ್ಣ ಕನಸಿನ ಕಲರವ. ಆ ಕನಸಿನಲ್ಲಿ ಜನಕ ಮಹಾರಾಜ ಆ ಕನಸಿನಲ್ಲಿ ರೊಟ್ಟಿ ತಿನ್ನುವ ಸಲುವಾಗಿ ಯಾರ ಬಳಿಯೋ ಬೇಡಿದಂತೆ, ಇನ್ನೇನೇನೋ ಕನಸುಗಳ ಸರಣೆ ಯಾತ್ರೆ. ಕನಸಿನಲಿ ತಡೆಯಲಾರದ ಹಸಿವಿನ ಹೊಡೆತ, ಬೇಡಿದ ರೊಟ್ಟಿ ದೊರೆಯದ ನೋವಿನ ಭಾವದ ನಡುವೆ ಎಚ್ಚರವಾಯಿತಂತೆ.

ಎಚ್ಚರವಾದಾಗ ನೋಡಿದರೆ ರೊಟ್ಟಿಯೂ ಇಲ್ಲ, ರೊಟ್ಟಿ ಹಿಡಿದಿದ್ದ ವ್ಯಕ್ತಿಯೂ ಇಲ್ಲ, ದರಬಾರ್ ನಡೆಯುತ್ತಿದೆ. ತಾನು ಸಿಂಹಾಸನದ ಮೇಲೆ ಕುಳಿತು ನಿದ್ರೆಯ ಜೊಂಪಿನಲಿ ಕಂಡ ಕನಸಿದು. ಆದರೆ ಹೊಟ್ಟೆಯಲಿ ಉಳಿದಿರುವ ಹಸಿವು ಕಂಡ ಕನಸನ್ನು ಕೇವಲ ಕನಸು ಇನ್ನಲು ಒಪ್ಪುತ್ತಿಲ್ಲ. ಈ ಗೊಂದಲವನ್ನು ಜನಕ ಮಹಾರಾಜ ತನ್ನ ಆಸ್ಥಾನದಲ್ಲಿ ಬಂದಿದ್ದ ಅಷ್ಟಾವಕ್ರ ಮುನಿಯ ಬಳಿ ಕೇಳಿದನಂತೆ. ಆ ಸಂವಾದದ ಸಂಪೂರ್ಣ ಪಾಠವೇ ಅಷ್ಟಾವಕ್ರ ಗೀತಾ.

ಅಷ್ಟಾವಕ್ರ ಮುನಿ ಬದುಕಿನ ಸಂಪೂರ್ಣ ಜ್ಞಾನ ಪಡೆದಿದ್ದ ಮಹಾ ತಪಸ್ವಿ. ತನ್ನ ದೇಹದಲ್ಲಿ ಎಂಟು ವಕ್ರಗಳನ್ನು ಹೊಂದಿದ್ದ ವ್ಯಕ್ತಿ. ಒಂದು ಕೈ ಉದ್ದ, ಮತ್ತೊಂದು ಗಿಡ್ಡ, ಹೀಗೇ ಎಂಟು ವಕ್ರಗಳು. ಜ್ಞಾನದಲ್ಲಿ ಅಪ್ರತಿಮ.

ಸತ್ಯ ಮತ್ತು ಮಿಥ್ಯಗಳ ಅನ್ವೇಷಣೆಯೇ ಈ ಅಷ್ಟಾವಕ್ರ ಗೀತಾ.... ಒಮ್ಮೆ ಕೇಳಿ ಆನಂದಿಸಿ.