Friday, April 2, 2010

ಬೆಂಗಳೂರೆಂಬೋ ಮಾಯಾನಗರಿ - I

ಬೆಂಗಳೂರು ಅಂದರೆ ಇಂದು ನಿನ್ನೆಯದಲ್ಲ. ನೀವು ಲಾಲಬಾಗ್ ತೋಟದಲ್ಲಿ ಕೆಂಪೇಗೌಡ ಗಡಿ ಗೋಪುರದ ಬಳಿ ನಿಂತಾಗ ಸುಮಾರು ೨೯೦-೩೦೦ ಕೋಟಿ ವರುಷಗಳ ಬಂಡೆಯ ಮೇಲೆ ನಿಂತಿದ್ದೀರಿ.
ಕ್ರಿಸ್ತ ಪೂರ್ವ ೬೦೦೦ ದಷ್ಟು ಹಿಂದೆಯೇ ಇಲ್ಲಿ ಹೊಸ ಶಿಲಾಯುಗದ ಜನರು ವಾಸ ಮಾಡುತ್ತಿದ್ದರು. ೧೬-17ನೆಯ ಶತಮಾದಲ್ಲಿ ನಿರ್ಮಾಣವಾದ ಹಲಸೂರಿನ ಸೋಮೇಶ್ವರ ದೇವಾಲಯ ನಗರದ ಹಿರಿಮೆಗಳಲ್ಲೊಂದು.

ಬೆಂಗಳೂರು ಹಾಗೂ ಇಂದಿನ ಕರ್ನಾಟಕದ ಬಹುಭಾಗ ದಕ್ಷಿಣ ಭಾರತದ ಪ್ರಸ್ಥಭೂಮಿ. ಸಮುದ್ರ ಮಟ್ಟದಿಂದ ಸರಾಸರಿ ೯೦೦ ಮೀಟರು ಎತ್ತರದಲ್ಲಿರುವುದರಿಂದ ಇಲ್ಲಿನ ಪರಿಸರ ಸದಾ ಆಹ್ಲಾದಕರ. ಬೆಂಗಳೂರು (ಮೆಟ್ರೋಪೋಲ್ ) ಮಹಾನಗರ ಸುಮಾರು ೧೪೦೦ ಚ.ಕಿ.ಮೀ ಪ್ರದೇಶಗಳನ್ನು ಒಳಗೊಂಡ ಪ್ರದೇಶ.
1949ರಲ್ಲಿ ಬೆಂಗಳೂರಿಗೆ ನಗರಸಭೆ ಆಡಳಿತ ಆರಂಭ. ಆಗ ನರದ ವಿಸ್ತೀರ್ಣ ೬೯ ಚ.ಕಿಲೋ ಮೀಟರು. 1970ರ ದಶಕದಲ್ಲಿ ೪೦೦ ಚದರ ಕಲೋಮೀಟರಿಗೆ ಹಿಗ್ಗಿತು. ಈಗ ಬೆಳೆಯುತ್ತಿರುವ ವೇಗ ಮತ್ತು ಅದರ ಓಘ ದೇವರಿಗೇ ಪ್ರೀತಿ.
ಬಸವನಗುಡಿಯ ಬಸವನ ಪಾದದ ಕೆಳಗೆ ಉದ್ಭವವಾಗುವ ವೃಷಭಾವತಿ ಬಿಟ್ಟರೆ ಹೆಸರಿಗೆ ಕೂಡಾ ಬೆಂಗಳೂರಿಗೆ ಬೇರೆ ನದಿ ಇಲ್ಲ. ಬಸವನ ಪಾದದ ಅಡಿಯಿಂದ ಶುದ್ಧ ನೀರಿನ ತೊರೆಯಾಗಿ ಹರಿಯುವ ವೃಷಭಾವತಿ ನದಿಯ ಬಗ್ಗೆ ಶಾಸನಗಳಲ್ಲಿ ಕೂಡಾ ಉಲ್ಲೇಖವಿದೆ.

1 comment: