Monday, March 29, 2010

ಬೆಂಗಳೂರು ಕರಗ

ಇಂದು ಚೈತ್ರ ಮಾಸದ ಹುಣ್ಣಿಮೆ..... ವರುಷದ ಮೊದಲ ಬೆಳದಿಂಗಳ ರಾತ್ರಿ. ಯುಗಾದಿಯ ನಂತರದ ವಸಂತ ನವರಾತ್ರಿ ಈ ಕರಗದೊಂದಿಗೆ ಮುಕ್ತಾಯವಾಗುತ್ತದೆ.
ಬೆಂಗಳೂರು ಕರಗ ಬೆಂಗಳೂರಿನ ಹಿರಿಮೆಯ ಸಂಕೇತ.
ಕೆಂಪೇಗೌಡರು ಕಟ್ಟಿದ 64 ಪೇಟೆಗಳ ನಡುವೆ ಸಂಚರಿಸುವ ಕರಗ ಧಾಮಿ೵ಕ ಒಡನಾಟದ ಸಂಕೇತವೂ ಹೌದು. ಹಾಜಿ ಮಸ್ತಾನ್ ಸಾಬ್ ದಗಾ೵ದಲ್ಲಿ ಪೂಜೆಗೊಳ್ಳುವ ಮೂಲಕ ಧಾಮಿ೵ಕ ಚೌಕಟ್ಟನ್ನೂ ಸಹಾ ಮೀರುತ್ತದೆ.
ಕರಗವು ದ್ರೌಪದಿ ಕರಗ ಎಂದೇ ಪ್ರಸಿದ್ದಿ. ಮಾತೃ ಪೂಜೆಯ ಸಂಪ್ರದಾಯದ ಹಿನ್ನೆಲೆ ಇದಕ್ಕಿದೆ.
ಕುಂಭದಲ್ಲಿ ದುಗೆ೵ಯನ್ನು ಆವಾಹಿಸಿ. ಅದನ್ನು ಪೂಜಿಸಿ, ಮಲ್ಲಿಗೆ ಮಾಲೆಗಳಿಂದ ಅಲಂಕರಿಸಿ, ಖಡ್ಗಧಾರಿಗಳಾದ ವೀರಕುಮಾರರ ರಕ್ಷಣೆಯಲ್ಲಿ ಚೈತ್ರ ಹುಣ್ಣಿಮೆಯ ರಾತ್ರಿ ಧಮ೵ರಾಯ ದೇವಸ್ಥಾನದಿಂದ ಹೊರಡುವ ಕರಗ, ಇಡಿಯ ಪೇಟೆ ಪ್ರದೇಶವನ್ನು ಸಂಚರಿಸಿ ಬೆಳಗ್ಗೆ ದೇವಸ್ಥಾನಕ್ಕೆ ಹಿಂತಿರುಗುತ್ತದೆ.

ಇದು ಒಂದು ರೀತಿಯಲ್ಲಿ ಪ್ರಕೃತಿ ಪೂಜೆಯೂ ಹೌದು. ಸಂಪಂಗಿ ಕೆರೆ ಹಾಗೂ ಕೆಂಪಾಂಬುಧಿ ಕೆರೆಗಳ ಸಮೀಪ ಪೂಜೆಗೊಳ್ಳುವ ಹಸಿ ಕರಗ ಜನರಿಗೆ ಜಲಮೂಲಗಳ ಬಗ್ಗೆ ಗೌರವ ಮೂಡಿಸುವ ಪ್ರಕ್ರಿಯೆಯೂ ಹೌದು.
ಎಲ್ಲ ಜಾತಿ ಮತಗಳ ಜನರೂ ಸಹಾ ಇದರಲ್ಲಿ ಪಾಲುಗೊಳ್ಳುತ್ತಾರೆ. ಬೆಂಗಳೂರಿನ ಸಮೀಪದ ಹಳ್ಳಿಗಳಿಂದ ನೂರಾರು ದೇವಾಲಯಗಳ ರಥಗಳು ಈ ಜಾತ್ರೆಯಲ್ಲಿ ಪಾಲ್ಗೊಂಡು ಇದೊಂದು ಉತ್ಸವವಾಗಿ ಮಾಪಾ೵ಡಾಗುತ್ತದೆ.

2 comments:

  1. ಉತ್ತಮವಾದ ಮಾಹಿತಿಯನ್ನು ಒದಗಿಸಿದ್ದೀರಿ.
    ಅಭಿನಂದನೆಗಳು..
    ಹಾಗೆ ಬ್ಲಾಗ್ ಲೋಕಕ್ಕೆ ಸ್ವಾಗತ...
    ಸುಂದರವಾದ ಬರಹಗಳಿಂದ,
    ನಿಮ್ಮ ಬ್ಲಾಗ್ ಬೆಳಗಲಿ...

    ReplyDelete
  2. ಬ್ಲೊಗ್ ಲೋಕಕ್ಕೆ ಸ್ವಾಗತ. ಲೇಖನದ ಮಾಹಿತಿ ಚೆನ್ನಾಗಿದೆ. ಹನುಮಜಯ೦ತಿಯ೦ದು ಕಟ್ಟಿದ ಸೇತುಭ೦ಧ ಭಾವನೆಗಳ ಓಡಾಟದ ರಹದಾರಿಯಾಗಿ ಕೆಟ್ಟದ್ದು ಅಳಿಯಲು ಮತ್ತು ಒಳ್ಳೆಯದು ಮರೆಯಲು ಕಾರಣವಾಗಲಿ ಎ೦ದು ಹಾರೈಸುವೆ.

    ReplyDelete